ಈ ವಾರ ತೆರೆಗೆ `ಡಾರ್ಲಿಂಗ್`
Posted date: 29 Wed, Jan 2014 – 10:00:01 AM

ಬಹು ನಿರೀಕ್ಷಿತ ಚಿತ್ರ `ಡಾರ್ಲಿಂಗ್` ತಂತ್ರಜ್ಞರೆಲ್ಲ ಸೇರಿ ನಿರ್ಮಿಸಿದ ಆಲೆಮಾರಿ ಖ್ಯಾತಿ ನಿರ್ದೇಶಕ ಸಂತು ಅವರ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ. ಟಾಟೋ ಹಾಕುವ ಕಸುಬಿನಲ್ಲಿ ನಾಯಕ ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಅವರು ಸಹ ನಿರ್ದೇಶಕ ಸಂತು, ಛಾಯಾಗ್ರಹಕ ಮಂಜುನಾಥ್ ನಾಯಕ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಂತೆ `ಡಾರ್ಲಿಂಗ್` ಚಿತ್ರದ ನಿರ್ಮಾಪಕರು. ಎಸ್ ಟೀಮ್ ಹಾಗೂ ಸಾಮಿ ಅಸ್ಸೋಸಿಯಟ್ ನಿರ್ಮಾಣದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ.

ಯೋಗೀಶ್ ಜೊತೆಗೆ ನಾಯಕಿ ಮುಕ್ತ, ಪೋಷಕ ಪಾತ್ರಗಳಲ್ಲಿ ಅವಿನಾಷ್, ಆದಿ ಲೋಕೇಶ್, ಮಾಸ್ ಮಾಧ, ಉದಯ್, ಗೌತಮ್, ಶಶಿ, ಮಾರಿ ಮುತ್ತು, ಮೋಹನ್ ಮಾಂಬಳ್ಳಿ ಹಾಗೂ ಇತರರು.

೪೨ ದಿವಸಗಳಲ್ಲಿ ಪೂರ್ಣಗೊಂಡ ಚಿತ್ರಕ್ಕೆ ಸಂತು ಅವರದೇ ಚಿತ್ರಕ್ಕೆ ಕಥೆ, ಚಿತ್ರಕಥೆ ಸಹ ಇದೆ. ಮಂಜು ಮಾಂಡವ್ಯಅವರ ಸಂಭಾಷಣೆ, ಮಾಸ್ ಮಾಧ ಅವರ ಸಾಹಸ ಈ ಚಿತ್ರಕ್ಕೆ ಇದೆ. ಕಲೈ ನೃತ್ಯ ನಿರ್ದೇಶನದ ಜೊತೆಗೆ ಸಲ್ಮಾನ್ ಯೂಸುಫ್ ಮುಂಬೈ ಖ್ಯಾತಿಯ ವ್ಯಕ್ತಿ ಈ ಚಿತ್ರಕ್ಕೆ `ಡಬ್ಬ` ಸಾಂಗ್ ನೃತ್ಯ ನಿರ್ದೇಶನ ಮಾಡಿರುವರು.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed